Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮೇಲಿನ ರೋಹಿತ್ ಶರ್ಮಾ ಅಸಮಾಧಾನಕ್ಕೆ ಕೆಎಲ್ ರಾಹುಲ್ ಬಲಿಯಾದರೇ?!

ವಿರಾಟ್ ಕೊಹ್ಲಿ ಮೇಲಿನ ರೋಹಿತ್ ಶರ್ಮಾ ಅಸಮಾಧಾನಕ್ಕೆ ಕೆಎಲ್ ರಾಹುಲ್ ಬಲಿಯಾದರೇ?!
ದುಬೈ , ಶುಕ್ರವಾರ, 21 ಸೆಪ್ಟಂಬರ್ 2018 (07:24 IST)
ದುಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಗೆ ಅವಕಾಶ ನೀಡಿದ ನಾಯಕ ರೋಹಿತ್ ಶರ್ಮಾ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಟೆಸ್ಟ್ ತಂಡದಲ್ಲಿ ತಮಗೆ ಸ್ಥಾನ ಸಿಗದಂತಾಗಲು ವಿರಾಟ್ ಕೊಹ್ಲಿ ಕಾರಣ ಎಂದು ಅಸಮಾಧಾನಗೊಂಡಿರುವ ರೋಹಿತ್ ಶರ್ಮಾ ಅದನ್ನು ಕೊಹ್ಲಿ ಮೆಚ್ಚಿನ ಆಟಗಾರ ಕೆಎಲ್ ರಾಹುಲ್ ಮೇಲೆ ತೀರಿಸಿಕೊಂಡರಾ ಎಂದು ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ದಿನೇಶ್ ಕಾರ್ತಿಕ್ ಬದಲು ರಾಹುಲ್ ಗೆ ಅವಕಾಶ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಹಾಗೆ ನೋಡಿದರೆ ರೋಹಿತ್ ಶರ್ಮಾಗಿಂತಲೂ ರಾಹುಲ್ ಏಕದಿನ ಪಂದ್ಯಗಳಲ್ಲಿ ಹೆಚ್ಚು ಕ್ಷಮತೆ ಹೊಂದಿದ್ದಾರೆ. ಅವರನ್ನೇ ಪಾಕಿಸ್ತಾನದಂತಹ ಮಹತ್ವದ ಪಂದ್ಯಕ್ಕೆ ಹೊರಗಿಟ್ಟಿರುವುದರ ಹಿಂದಿನ ಲಾಜಿಕ್ ಏನು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲ, ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ದಿನೇಶ್ ಕಾರ್ತಿಕ್ ಬದಲಿಗೆ ರಾಹುಲ್ ಗೆ ಅವಕಾಶ ನೀಡಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ. ಹಾಂಗ್ ಕಾಂಗ್ ವಿರುದ್ಧ ರಾಹುಲ್ ಗೆ ಪಾಕ್ ವಿರುದ್ಧ ಆಡಲು ವಿಶ್ರಾಂತಿ ನೀಡಿರಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಪಾಕ್ ಪಂದ್ಯಕ್ಕೂ ರಾಹುಲ್ ರನ್ನು ಆಯ್ಕೆ ಮಾಡದೇ ಇರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪಾಕಿಸ್ತಾನ ನಾಯಕ ಸರ್ಫ್ರಾಜ್ ಅಹ್ಮದ್