Publish Date: Tue, 18 Sep 2018 (09:32 IST)
Updated Date: Tue, 18 Sep 2018 (09:33 IST)
ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಿಂದ ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ್ದಕ್ಕೆ ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸಂಸ್ಥೆ ತಕರಾರು ತೆಗೆದಿದೆ.
ಕೊಹ್ಲಿ ಇಲ್ಲದ ಟೀಂ ಇಂಡಿಯಾ ಬೆಸ್ಟ್ ಟೀಂ ಅಲ್ಲ. ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿಗೆ ಬಿಸಿಸಿಐ ಸಶಕ್ತ ತಂಡವನ್ನು ಆರಿಸದೇ ಟೂರ್ನಿಗೆ ನಷ್ಟ ಮಾಡಿದೆ ಎಂದು ಏಷ್ಯಾ ಕಪ್ ಕ್ರಿಕೆಟ್ ಕೌನ್ಸಿಲ್ ಗೆ ಸ್ಟಾರ್ ಸಂಸ್ಥೆ ಪತ್ರ ಮುಖೇನ ದೂರು ನೀಡಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಒಂದು ತಂಡದ ಆಯ್ಕೆ ವಿಚಾರದಲ್ಲಿ ಮೂಗು ತೂರಿಸುವ ಮತ್ತು ಪ್ರಶ್ನಿಸುವ ಅರ್ಹತೆ ನೇರಪ್ರಸಾರದ ಹಕ್ಕು ಪಡೆದಿರುವ ಸಂಸ್ಥೆಗಿಲ್ಲ. ಟೀಂ ಇಂಡಿಯಾ ಏಷ್ಯಾ ಕಪ್ ಗೆ ಕೊಹ್ಲಿ ಹೊರತಾಗಿಯೂ ಅತ್ಯುತ್ತಮ ತಂಡವನ್ನೇ ಕಣಕ್ಕಿಳಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.