Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ನಲ್ಲಿ ಆಡುತ್ತಿರುವ ಟೀಂ ಇಂಡಿಯಾಗೆ ಈಗ ಧೋನಿಯೇ ಬಾಸ್! ಹೇಗಂತೀರಾ?

ಧೋನಿ
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ದುಬೈಗೆ ಬಂದಿಳಿದಿರುವ  ಟೀಂ ಇಂಡಿಯಾಗೆ ಇದೀಗ ಹಿರಿಯ ಆಟಗಾರ ಧೋನಿಯೇ ಬಾಸ್! ಹೇಗೆ ಅಂತೀರಾ?

ಧೋನಿ, ರೋಹಿತ್ ಶರ್ಮಾ ಸೇರಿದಂತೆ ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿರದ ಏಕದಿನ ಸ್ಪೆಷಲಿಸ್ಟ್ ಗಳ ತಂಡ ಒಟ್ಟಾಗಿ ಮೊನ್ನೆಯೇ ದುಬೈಗೆ ಬಂದಿಳಿದಿತ್ತು. ಆದರೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸೇರಿದಂತೆ ಇನ್ನು ಉಳಿದ ಆಟಗಾರರು ಇಂಗ್ಲೆಂಡ್ ನಿಂದ ಭಾನುವಾರವಷ್ಟೇ ಆಗಮಿಸುತ್ತಿದ್ದರು.

ಆದರೆ ಟೀಂ ಇಂಡಿಯಾ ದುಬೈಗೆ ಬಂದಿಳಿದ ತಕ್ಷಣ ಅಭ್ಯಾಸದಲ್ಲಿ ಪಾಲ್ಗೊಂಡಿತ್ತು. ಈ ನೆಟ್ ಪ್ರಾಕ್ಟೀಸ್ ನ ನೇತೃತ್ವ ವಹಿಸಲು ಕೋಚ್ ರವಿಶಾಸ್ತ್ರಿ ಇರಲಿಲ್ಲ. ಹೀಗಾಗಿ ಹಿರಿಯ ಆಟಗಾರನಾಗಿದ್ದ ಧೋನಿಯೇ ನೇತೃತ್ವ ವಹಿಸಿಕೊಂಡು ಯುವ ಆಟಗಾರರಿಗೆ ಸಲಹೆ ಸೂಚನೆ ಕೊಡುತ್ತಾ ಅಭ್ಯಾಸ ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ನಲ್ಲಿ ಇಂದು ಟೀಂ ಇಂಡಿಯಾಗೆ ಮೊದಲ ಪಂದ್ಯ: ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್