Publish Date: Thu, 20 Sep 2018 (09:02 IST)
Updated Date: Thu, 20 Sep 2018 (09:05 IST)
ಮುಂಬೈ: ಇಂಗ್ಲೆಂಡ್ ಪ್ರವಾಸ ಮುಗಿಸಿ ಮುಂಬೈನ ತಮ್ಮ ಮನೆಗೆ ಮರಳುವ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಪುಟಾಣಿ ಅಭಿಮಾನಿಯೊಬ್ಬರ ಜತೆ ನಡೆದುಕೊಂಡ ರೀತಿಗೆ ವಿರಾಟ್ ಕೊಹ್ಲಿ ದಂಪತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಶರ್ಮಾ ಜತೆ ಬಂದಿಳಿದ ಕೊಹ್ಲಿ ತಮ್ಮ ಕಾರಿನ ಬಳಿ ಸಾಗುವಾಗ ಬಾಲಕನೊಬ್ಬ ಕೊಹ್ಲಿಯ ಫೋಟೋಗಳ ಸಂಗ್ರಹವನ್ನು ಅಟೋಗ್ರಾಫ್ ಗಾಗಿ ಎದುರು ಹಿಡಿದಿದ್ದ.
ಆದರೆ ಕೊಹ್ಲಿ ಆತನ ಕೈಯನ್ನು ತಳ್ಳಿ ಪತ್ನಿ ಅನುಷ್ಕಾ ಜತೆ ಕಾರಿನತ್ತ ಸಾಗಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿಯ ಈ ವರ್ತನೆ ದುರಹಂಕಾರದ್ದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಾಲಕ ತನಗಾಗಿ ಏನು ಮಾಡಿದ್ದ ಎಂದು ನೋಡುವುದಕ್ಕೂ ಕೊಹ್ಲಿಗೆ ವ್ಯವಧಾನವಿರಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.