Publish Date: Thu, 20 Sep 2018 (07:15 IST)
Updated Date: Thu, 20 Sep 2018 (07:17 IST)
ದುಬೈ: ಏಷ್ಯಾ ಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಪಾಕ್ ಪಂದ್ಯಕ್ಕೆ ಇಡೀ ವಿಶ್ವವೇ ಎದುರು ಕಾಯುತ್ತಿತ್ತು. ಟೀಂ ಇಂಡಿಯಾ ಪಾಕ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದಾಗ ಡಗ್ ಔಟ್ ನಲ್ಲಿ ಕಾಮೆಂಟರಿ ಹೇಳುತ್ತಿದ್ದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮೊಗದಲ್ಲೂ ತೃಪ್ತಿಯ ನಗು.
ಕಳೆದ ಬಾರಿ ಭಾರತ ಪಾಕ್ ಎದುರಾಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ. ಆಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದರು. ಕೊಹ್ಲಿ ನೇತೃತ್ವದ ಹುಡುಗರು ಪಾಕ್ ಎದುರು ಹೀನಾಯವಾಗಿ ಸೋತ ಹತಾಶೆ ಕುಂಬ್ಳೆಗೆ ಆಗಿತ್ತು.
ಆ ಸೋಲಿನ ಸೇಡು ಇಂದಿಗೆ ಪೂರ್ತಿಯಾಗಿದೆ. ಪಾಕಿಸ್ತಾನ ನೀಡಿದ 163 ರನ್ ಗಳ ಸಾಧಾರಣ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 29 ಓವರ್ ಗಳಲ್ಲೇ ಪೂರ್ತಿಗೊಳಿಸಿತು. ಆ ಮೂಲಕ 8 ವಿಕೆಟ್ ಗಳ ಜಯ ಸಾಧಿಸಿತು.
ಭಾರತದ ಪರ ಶಿಖರ್ ಧವನ್ 46, ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಅಂಬುಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ತಲಾ ಅಜೇಯ 31 ರನ್ ಗಳಿಸಿದರು. ಇದರೊಂದಿಗೆ ಭಾರತ ಕೂಟದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.