Publish Date: Fri, 21 Sep 2018 (20:50 IST)
Updated Date: Fri, 21 Sep 2018 (20:52 IST)
ದುಬೈ: ಅಬುದಾಬಿಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಗೆಲುವಿಗೆ 174 ರನ್ ಗಳ ಗುರಿ ನೀಡಿದೆ.
ಹಲವು ದಿನಗಳ ನಂತರ ಏಕದಿನ ತಂಡಕ್ಕೆ ಆಗಮಿಸಿದ್ದ ರವೀಂದ್ರ ಜಡೇಜಾ 10 ಓವರ್ ಗಳಲ್ಲಿ ಕೇವಲ 29 ರನ್ ನೀಡಿ 4 ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನುಲುಬು ಮುರಿದ ಜಡೇಜಾ ಬಾಂಗ್ಲಾ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡರು.
ಆರಂಭದಲ್ಲಿ ಭುವನೇಶ್ವರ್ ಕುಮಾರ್ ಎಂದಿನಂತೆ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಿತ್ತರೆ ಅವರಿಗೆ ತಕ್ಕ ಸಾಥ್ ನೀಡಿದ ಜಸ್ಪ್ರೀತ್ ಬುಮ್ರಾ ಕೂಡಾ 3 ವಿಕೆಟ್ ತಮ್ಮದಾಗಿಸಿಕೊಂಡರು. ಆದರೆ ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಕೇದಾರ್ ಜಾದವ್ ಗೆ ಈಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಅಂತಿಮವಾಗಿ ಬಾಂಗ್ಲಾ 173 ರನ್ ಗಳಿಗೆ ಆಲೌಟ್ ಆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.