Select Your Language

Notifications

webdunia
webdunia
webdunia
webdunia

ಇಂದು ಮತ್ತೊಂದು ಭಾರತ-ಪಾಕ್ ಕದನ: ಟೀಂ ಇಂಡಿಯಾ ಪಾಲಿಗೆ ಬ್ಲ್ಯಾಕ್ ಸಂಡೇ ಆಗದಿರಿಲಿ!

ಇಂದು ಮತ್ತೊಂದು ಭಾರತ-ಪಾಕ್ ಕದನ: ಟೀಂ ಇಂಡಿಯಾ ಪಾಲಿಗೆ ಬ್ಲ್ಯಾಕ್ ಸಂಡೇ ಆಗದಿರಿಲಿ!
ದುಬೈ , ಭಾನುವಾರ, 23 ಸೆಪ್ಟಂಬರ್ 2018 (09:59 IST)
ದುಬೈ: ಇಂದು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ.

ಲೀಗ್ ಹಂತದ ಪಂದ್ಯದಲ್ಲಿ ಈ ತಂಡಗಳು ಈಗಾಗಲೇ ಪರಸ್ಪರ ಸೆಣಸಾಟ ನಡೆಸಿದ್ದು, ಭಾರತಕ್ಕೆ ಭರ್ಜರಿ ಗೆಲುವು ದಕ್ಕಿತ್ತು. ಆದರೆ ಮುಂದಿನ ಬಾರಿ ನಾವು ಇದಕ್ಕೆ ತಿರುಗೇಟು ಕೊಟ್ಟೇ ಕೊಡುತ್ತೇವೆ ಎಂದು ಪಾಕ್ ನಾಯಕ ಸರ್ಫ್ರಾಜ್ ಅಹ್ಮದ್ ಹೇಳಿಕೊಂಡಿದ್ದರು.

ಹಿಂದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಎದುರಾಗಿದ್ದವು. ಆಗಲೂ ಲೀಗ್ ಹಂತದಲ್ಲಿ ಭಾರತ ಗೆದ್ದು, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಆ ಫಲಿತಾಂಶ ಮತ್ತೆ ಪುನರಾವರ್ತನೆಯಾಗದಿರಲಿ ಎಂದು ಟೀಂ ಇಂಡಿಯಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಭಾರತ ಈ ಪಂದ್ಯಕ್ಕೆ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಅದರ್ಥ ಕೆಎಲ್ ರಾಹುಲ್ ಮತ್ತೆ ಬೆಂಚ್ ಕಾಯಿಸಬೇಕಾಗುತ್ತದೆ. ರವೀಂದ್ರ ಜಡೇಜಾ ಕಳೆದ ಪಂದ್ಯದಲ್ಲಿ ಅದ್ಭುತ ನಿರ್ವಹಣೆ ತೋರಿರುವುದರಿಂದ ಅವರ ಸ್ಥಾನ ಪಕ್ಕಾ ಆಗಲಿದೆ. ಉಳಿದಂತೆ ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಯಾವುದೇ ಬದಲಾವಣೆ ನಡೆಸುವ ಸಾಧ್ಯತೆಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಕ್ಕೆ ಈಗಲೂ ಧೋನಿಯೇ ಕ್ಯಾಪ್ಟನ್ ಎನ್ನುವುದಕ್ಕೆ ನಿನ್ನೆಯ ಪಂದ್ಯದಲ್ಲಿ ಸಿಕ್ಕಿತು ಸಾಕ್ಷಿ!