Publish Date: Tue, 25 Sep 2018 (09:07 IST)
Updated Date: Tue, 25 Sep 2018 (09:09 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕರಾಗಿದ್ದರೂ ಧೋನಿ ಪ್ರಭಾವ ಎಷ್ಟಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ರೋಹಿತ್ ಶರ್ಮಾಗೆ ಸದಾ ತನ್ನ ಸಲಹೆ ಕೊಡುತ್ತಿರುವ ಧೋನಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ರಿವ್ಯೂ ಪಡೆಯುವುದರಲ್ಲಿ ಧೋನಿಯಷ್ಟು ಕರಾರುವಾಕ್ ಯಾರೂ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ.
ಪಾಕಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದಾಗ ಆರಂಭಿಕ ಇಮಾಮುಲ್ ಹಕ್ ವಿರುದ್ಧ ಯಜುವೇಂದ್ರ ಚಾಹಲ್ ಎಲ್ ಬಿಡಬ್ಲ್ಯು ಮನವಿ ಮಾಡಿದ್ದರು. ಆದರೆ ಅಂಪಾಯರ್ ಅದನ್ನು ಪುರಸ್ಕರಿಸಲಿಲ್ಲ. ಆದರೆ ಅಷ್ಟಕ್ಕೆ ಸುಮ್ಮನಾಗದ ಧೋನಿ ರೋಹಿತ್ ಶರ್ಮಾಗೆ ರಿವ್ಯೂ ಪಡೆಯುವಂತೆ ಸಲಹೆ ನೀಡಿದರು. ಧೋನಿ ಲೆಕ್ಕಾಚಾರ ಸುಳ್ಳಾಗಲಿಲ್ಲ. ರಿವ್ಯೂನಲ್ಲಿ ಇಮಾಮುಲ್ ಔಟಾಗಿದ್ದು ಸ್ಪಷ್ಟವಾಗಿತ್ತು. ಆ ಮೂಲಕ ಭಾರತಕ್ಕೆ ಮೊದಲ ವಿಕೆಟ್ ಸಿಕ್ಕಿತು. ಧೋನಿಯ ಬುದ‍್ಧಿಮತ್ತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.