Publish Date: Mon, 05 Aug 2019 (18:40 IST)
Updated Date: Mon, 05 Aug 2019 (18:44 IST)
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಾಗರಪಂಚಮಿ ಹಬ್ಬದ ಮನೆ ಮಾಡಿದೆ.
ಪ್ರಖ್ಯಾತ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಅಭಿಷೇಕ, ಹೋಮ, ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ನಾಗರ ಪಂಚಮಿ ಹಬ್ಬದಲ್ಲಿ ಪಾಲ್ಗೊಂಡ ಭಕ್ತರು ಧನ್ಯತಾ ಭಾವ ಮೆರೆದ್ರು. ಜಗದ್ಗುರುಗಳು ಆಶೀರ್ವಾದ ಪಡೆದುಕೊಂಡ್ರು.