Publish Date: Mon, 05 Aug 2019 (18:30 IST)
Updated Date: Mon, 05 Aug 2019 (18:34 IST)
ಬಂಡಿಗಳಲ್ಲಿ ಆಗಮಿಸಿದ ನೂರಾರು ರೈತರು ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಕೋಲಾರದಲ್ಲಿ ಪಶು ಆಹಾರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಕೋಲಾರ ಹಾಲು ಒಕ್ಕೂಟಕ್ಕೆ ರೈತರ ಸಂಘಟನೆ ಕಾರ್ಯಕರ್ತ ಮುತ್ತಿಗೆ ಹಾಕಲಾಗಿದೆ.
ಬಂಡಿಯೊಂದಿಗೆ ಎತ್ತುಗಳು, ಸೀಮೆ ಹಸು ಸಮೇತ ಪ್ರತಿಭಟನೆ ನಡೆಸಿ ರೈತರು ತಮ್ಮ ಆಕ್ರೋಶ ಹೊರಹಾಕಿದ್ರು.
ಪಶು ಆಹಾರಗಳನ್ನ ಕೋಮುಲ್ ಆವರಣದಲ್ಲಿ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ರು.
ಪಶು ಆಹಾರ ಬೆಲೆ ಏರಿಕೆ ಮಾಡಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆಗಿರೋ ರೈತರು ಕೋಮುಲ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.