Publish Date: Mon, 05 Aug 2019 (18:24 IST)
Updated Date: Mon, 05 Aug 2019 (18:25 IST)
ದೇವಸ್ಥಾನದ ಆವರಣದಲ್ಲೇ ಯುವಕನೊಬ್ಬನ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.
ಕೋಲಾರದಲ್ಲಿ ಅನುಮಾನಸ್ಪದವಾಗಿ ಯುವಕನ ಸಾವಾಗಿದೆ.
ಕೋಲಾರದ ಕೆಜಿಎಫ್ ಪಟ್ಟಣದ ರಾಮನ ದೇವಾಲಯದ ಆವರಣದಲ್ಲಿ ಘಟನೆ ನಡೆದಿದೆ.
ಪ್ರದೀಪ್ ರಾಜ್ (30) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನಾಗಿದ್ದಾನೆ. ಮೃತ ಪ್ರದೀಪ್ ರಾಜ್ ಕೆಜಿಎಫ್ ಪಟ್ಟಣದ ಹೌಸಿಂಗ್ ಕಾಲೋನಿ ನಿವಾಸಿಯಾಗಿದ್ದಾನೆ.
ಜಾತ್ರೆಗೆ ಹೋಗಿ ಮನೆಗೆ ವಾಪಸ್ಸು ಬರುವಾಗ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಮಾಡಿ ಕೆಜಿಎಫ್ ನಗರದಲ್ಲಿ ಶವವನ್ನ ಹಾಕಿರುವ ಶಂಕೆ ಕಂಡುಬಂದಿದೆ.
ಮೃತ ಪ್ರದೀಪ್ ರಾಜ್ ಗಾರೆ ಕೆಲಸ ಮಾಡುತ್ತಿದ್ದನು. ಈ ಕುರಿತು ಅಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.