Publish Date: Fri, 21 Aug 2020 (17:36 IST)
Updated Date: Fri, 21 Aug 2020 (17:39 IST)
ಈ ಬಾರಿಯ ಪ್ರಖ್ಯಾತ ಮೈಸೂರು ದಸರಾ ಮೇಲೆಯೂ ಡೆಡ್ಲಿ ಕೊರೊನಾ ಎಫೆಕ್ಟ್ ಕಂಡುಬಂದಿದೆ.
ಪ್ರತಿ ವರ್ಷದಂತೆ ಮೈಸೂರು ದಸರಾವನ್ನು ಅದ್ದೂರಿ ಆಚರಣೆ ಮಾಡುವುದಕ್ಕೆ ಸರಕಾರ ಕಡಿವಾಣ ಹಾಕಿದೆ.
ಸಾಂಪ್ರದಾಯಿಕ ಆಚರಣೆಗಳನ್ನು ಮಾಡಬೇಕು. ಅದ್ದೂರಿತನಕ್ಕೆ ಕಡಿವಾಣ ಹಾಕಬೇಕು.
ಸರಳವಾಗಿಯೇ ದಸರಾ ಆಚರಣೆ ಮಾಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶೀಘ್ರವಾಗಿ ದಸರಾ ಆಚರಣೆ ಕುರಿತು ಅಧಿಕೃತ ಮಾಹಿತಿ ಒದಗಿಸಲಿರುವುದಾಗಿ ಸಿಎಂ ತಿಳಿಸಿದ್ದಾರೆ.