Select Your Language

Notifications

webdunia
webdunia
webdunia
webdunia

ಸಿಎಂ ಕಾರ್ಯಕ್ರಮಕ್ಕೆ ಕಪ್ಪು ಪಟ್ಟೆ ಪ್ರತಿಭಟನೆ ಬಿಸಿ

ಸಿಎಂ ಕಾರ್ಯಕ್ರಮಕ್ಕೆ ಕಪ್ಪು ಪಟ್ಟೆ ಪ್ರತಿಭಟನೆ ಬಿಸಿ
ಮಂಡ್ಯ , ಶುಕ್ರವಾರ, 21 ಆಗಸ್ಟ್ 2020 (15:11 IST)
ಕೆಆರ್ ಎಸ್ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದ ಸಿಎಂಗೆ ಪ್ರತಿಭಟನೆಯ ಬಿಸಿ ತಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕಪ್ಪುಬಟ್ಟೆ  ತೋರಿಸಿ  ಪ್ರತಿಭಟನೆ  ಮಾಡಲು ಬಂದಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ.

ಮಂಡ್ಯದಲ್ಲಿ ಘಟನೆ ನಡೆದಿದ್ದು, ಹೋರಾಟಗಾರನನ್ನು  ಪೇಪರ್ ಮಿಲ್ ಗೇಟ್ ಬಳಿ ಬಂಧಿಸಿ ಕರೆದೊಯ್ದಿದ್ದಾರೆ ಪೊಲೀಸರು.

ತುಂಬಿದ KRS ಜಲಾಶಯಕ್ಕೆ ಸಿ.ಎಂ.ಬಾಗಿನ ಅರ್ಪಣೆ ಮಾಡಿದರು. 5 ನೇ ಬಾರಿ ಸಿ.ಎಂ. ಆಗಿ ಬಾಗಿನ ಅರ್ಪಿಸಿದ್ದಾರೆ ಯಡಿಯೂರಪ್ಪ.

ಅರ್ಚಕ ಡಾ.ಭಾನು ಪ್ರಕಾಶ್  ಶರ್ಮಾ ನೇತೃತ್ವದಲ್ಲಿ ಬಾಗಿನಕ್ಕೆ ಪೂಜೆ ಸಲ್ಲಿಕೆ ಮಾಡಲಾಯಿತು. ಬಾಗಿನ ಸಮರ್ಪಣೆ ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ ಮಾಡಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಕೊಂಚ ಚೇತರಿಕೆ