Publish Date: Fri, 21 Aug 2020 (12:20 IST)
Updated Date: Fri, 21 Aug 2020 (12:22 IST)
ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಯ ಬಳಿಕ ಕೊರೋನಾ ಸೋಂಕಿಗೊಳಗಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.
ಶ್ವಾಸಕೋಶದ ಸೋಂಕು ತಗುಲಿದ್ದ ಪ್ರಣಬ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ನಿನ್ನೆ ವರದಿಯಾಗಿತ್ತು. ಇದೀಗ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ ಹಾಗಿದ್ದರೂ ಅಪಾಯದಿಂದ ಪಾರಾಗಿಲ್ಲ ಎನ್ನಲಾಗಿದೆ. ಈಗಲೂ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.