Select Your Language

Notifications

webdunia
webdunia
webdunia
Tuesday, 8 April 2025
webdunia

ಪ್ರಣಬ್ ಮುಖರ್ಜಿ ಆರೋಗ್ಯದ ಬಗ್ಗೆ ಲೇಟೆಸ್ಟ್ ಮಾಹಿತಿ ಕೊಟ್ಟ ಪುತ್ರ

ಪ್ರಣಬ್ ಮುಖರ್ಜಿ
ನವದೆಹಲಿ , ಬುಧವಾರ, 19 ಆಗಸ್ಟ್ 2020 (10:35 IST)
ನವದೆಹಲಿ: ತೀವ್ರ ಅನಾರೋಗ್ಯಕ್ಕೀಡಾಗಿ ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದ ಬಗ್ಗೆ ಪುತ್ರ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

 
ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿರುವ ಪ್ರಣಬ್ ಈಗಲೂ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಈಗ ಸುಧಾರಿಸಿಕೊಳ್ಳುತ್ತಿದ್ದ ಚಿಕಿತ್ಸೆ ನೀಡಿದ ವೈದ್ಯರಿಗೆ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅಭಿಜಿತ್ ಹೇಳಿದ್ದಾರೆ.

ಚಿಕಿತ್ಸೆಗೆ ಅವರೀಗ ಸ್ಪಂದಿಸುತ್ತಿದ್ದಾರೆ. ಅವರ ವೈಟಲ್ ಪ್ಯಾರಾಮೀಟರ್ಸ್ ನಿಯಂತ್ರಣದಲ್ಲಿದೆ. ಎಲ್ಲವೂ ಸಹಜ ಸ್ಥಿತಿಗೆ ಬರಬಹುದು ಎಂಬ ವಿಶ್ವಾಸವಿದೆ. ಎಲ್ಲರಿಗೂ ಕೈ ಮುಗಿದ ಧನ್ಯವಾದ ಸಲ್ಲಿಸುವೆ ಎಂದು ಅಭಿಜಿತ್ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯ ವೃದ್ಧಿಸಲು ಬಸವನಹುಳ ಸಹಕಾರಿ. ಹೇಗೆ ಗೊತ್ತಾ?