Publish Date: Wed, 19 Aug 2020 (09:55 IST)
Updated Date: Wed, 19 Aug 2020 (09:57 IST)
ನವದೆಹಲಿ: ಯಾವುದೇ ರೀತಿಯ ದಾಳಿ ಎದುರಿಸಲು ಭಾರತೀಯ ವಾಯುಸೇನೆ ಪಾಕಿಸ್ತಾನ ಗಡಿಯಲ್ಲಿ ತೇಜಸ್ ಯುದ್ಧವಿಮಾನಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಿದೆ.
ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಭಾರತೀಯ ವಾಯುಸೇನೆ ಸರ್ವ ಸನ್ನದ್ಧವಾಗಿ ನಿಂತಿದೆ. ಶತ್ರುಪಡೆಯಿಂದ ಯಾವುದೇ ಕಿರಿಕ್ ಎದುರಾದರೆ ಮಾತ್ರ ಇವುಗಳು ಪ್ರತಿದಾಳಿ ನಡೆಸಲಿವೆ. ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ನೆರೆಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಭಾರತೀಯ ವಾಯುಸೇನೆ ಸ್ಚದೇಶೀ ನಿರ್ಮಿತ ತೇಜಸ್ ಯುದ್ಧ ವಿಮಾನಗಳನ್ನು ನಿಯೋಜಿಸಿರುವುದು ಗಮನಾರ್ಹ.