Publish Date: Fri, 21 Aug 2020 (11:17 IST)
Updated Date: Fri, 21 Aug 2020 (11:18 IST)
ಹೈದರಾಬಾದ್ : ಕೊರೊನಾದ ಹಿನ್ನಲೆಯಲ್ಲಿ ನಟ ನಾನಿ ಅಭಿನಯದ 25ನೇ ಚಿತ್ರ ‘ವಿ’ ಇದೀಗ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ.
ಕೊರೊನಾ ವೈರಸ್ ನಿಂದಾಗಿ ಸಿನಿಮಾ ಥಿಯೇಟರ್ ಗಳು ಮುಚ್ಚಳಲ್ಪಟ್ಟ ಹಿನ್ನಲೆಯಲ್ಲಿ ನಟ ನಾನಿ ಅಭಿನಯದ ‘ವಿ’ ಚಿತ್ರ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಸೆಪ್ಟಂಬರ್ 5ರಿಂದ ಜಾಗತಿಕ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ನಟ ನಾನಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಮೋಹನಾ ಕೃಷ್ಣ ಇಂದ್ರಗಂಟಿಯವರು ಕಥೆ-ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರದಲ್ಲಿ ನಾನಿ ಜೊತೆ ನಿವೇತಾ ಥಾಮಸ್, ಆದಿತಿ ರಾವ್ ಹೈದರಿ ನಟಿಸಿದ್ದಾರೆ.