ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಸಾವಿನ ಕೇಸ್ ನ ತನಿಖೆಯನ್ನು ಸಿಬಿಐ ಆರಂಭಿಸಿದೆ.
ಮುಂಬೈ ಆಗಮಿಸಿದ ಸಿಬಿಐ ತಂಡವು ಬಾಲಿವುಡ್ ನಟನ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನೀರಜ್ ಎಂಬಾತನನ್ನು ತೀವ್ರವಾಗಿ ವಿಚಾರಣೆ ನಡೆಸಿದೆ.
ಇನ್ನು, ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಮುಂಬೈ ಪೊಲೀಸರಿಂದ ಸಿಬಿಐ ತಂಡವು ಪಡೆದುಕೊಂಡಿತು.
ನಟ ಸಾವಿನ ಕುರಿತಾಗಿ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಸಿಬಿಐ ತನಿಖೆಗೆ ನಟನ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಬೇಗ ಸತ್ಯ ಹೊರ ಬಂದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ.