Select Your Language

Notifications

webdunia
webdunia
webdunia
webdunia

ರಾಜಕೀಯಕ್ಕಾಗಿ ಕೊಲೆ ನಡೆದಿವೆ : ಮಾಧುಸ್ವಾಮಿ

ರಾಜಕೀಯಕ್ಕಾಗಿ ಕೊಲೆ ನಡೆದಿವೆ : ಮಾಧುಸ್ವಾಮಿ
ಬೆಂಗಳೂರು , ಶನಿವಾರ, 30 ಜುಲೈ 2022 (16:01 IST)
ದಾವಣಗೆರೆ : ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ.
 
ಇದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಒತ್ತಾಯಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕೊಲೆ ಮಾಡುತ್ತಿರುವುದು ತಪ್ಪು, ಅದು ದುರ್ದೈವ. ಮಂಗಳೂರಿನಲ್ಲಿ ನಡೆದಂತ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಅದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು. ಇದನ್ನು ಉಲ್ಬಣ ಆಗಲು ಬಿಡಬಾರದು ಎಂದರು.

ಮಂಗಳೂರಿನಲ್ಲಿ ನಡೆದ ಘಟನೆ ಸರ್ಕಾರ ಸಹಿಸುವುದಿಲ್ಲ. ಪರಿಸ್ಥಿತಿ ತಿಳಿ ಮಾಡಲಿಲ್ಲ ಅಂದರೆ ತಪಾತ್ರೆಯ ಕಟ್ಟಿಟ್ಟ ಬುತ್ತಿ, ಹತ್ಯೆ ಮಾಡುವ ಹಂತಕ್ಕೆ ಯಾರು ಹೋಗಬಾರದು. ಆದರೆ ಪ್ರವೀಣ್ ಹತ್ಯೆ ಮಾಡಿದವರು, ಅವರ ಅಂಗಡಿಯಲ್ಲೇ ಕೆಲಸ ಮಾಡುವವರೆಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಪಕ್ಸೆ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ