Publish Date: Tue, 24 May 2022 (09:40 IST)
Updated Date: Tue, 24 May 2022 (09:46 IST)
ಬೆಂಗಳೂರು: ಐದು ವರ್ಷಗಳ ಹಿಂದೆ ಓರ್ವನನ್ನು ಕೊಲೆ ಮಾಡಿದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಕೊಲೆ ಆರೋಪಿ ಮಧು ಎಂಬಾತನನ್ನು ಇದೀಗ ಪೊಲೀಸರು ಸೆರೆ ಹಿಡಿದಿದ್ದಾರೆ.
2014 ರಲ್ಲಿ ಮನೆಯೊಂದಕ್ಕೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಆರೋಪಿ ಮಧು ಪರಾರಿಯಾಗಿದ್ದ. ಈ ವೇಳೆ ಪತಿಯ ಕೊಲೆಯಾಗಿತ್ತು. ಇದಾದ ಬಳಿಕ ಆತನನ್ನು ಬಂಧಿಸಿದ್ದರೂ ಮಧ್ಯಂತರ ಜಾಮೀನು ಪಡೆದು ತಲೆ ಮರೆಸಿಕೊಂಡಿದ್ದ. ಬಳಿಕ ಬಿಹಾರಕ್ಕೆ ತೆರಳಿ ಹೆಸರು ಬದಲಾಯಿಸಿಕೊಂಡು ಜೀವನ ಮಾಡುತ್ತಿದ್ದ.
ಆತ ತನ್ನ ಮನೆಯವರೊಂದಿಗೆ ಫೋನ್ ಸಂಪರ್ಕವಿಟ್ಟುಕೊಂಡಿರಲಿಲ್ಲ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ಆದರೆ ಈಗ ಬೆಂಗಳೂರಿಗೆ ಬಂದಿದ್ದ ಆತ ಸ್ನೇಹತನೊಂದಿಗೆ ಮಾಲ್ ಒಂದರಲ್ಲಿ ಸೆಲ್ಫೀ ಕ್ಲಿಕ್ಕಿಸಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದ. ಇದನ್ನು ಗಮನಿಸಿದ ಪೊಲೀಸರು ಆತನನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.