Publish Date: Tue, 24 May 2022 (09:10 IST)
Updated Date: Tue, 24 May 2022 (09:24 IST)
ಜೋಧ್ ಪುರ: ತನ್ನ ಜನ್ಮದಿನದ ನಿಮಿತ್ತ ಪಾರ್ಟಿ ಮಾಡಿ ಖುಷಿಯಲ್ಲಿದ್ದ 15 ವರ್ಷದ ಬಾಲಕಿ ಮೇಲೆ ನೆರೆಮನೆಯವರ ಸಂಬಂಧಿಕನ ಕಾಮದ ಕಣ್ಣು ಬಿದ್ದಿತ್ತು.
ಬಾಲಕಿಯ ಜನ್ಮದಿನದಂದೇ ನೆರೆಮನೆಯ ಹುಡುಗನ ಬರ್ತ್ ಡೇ ಇತ್ತು. ಹೀಗಾಗಿ ಎರಡೂ ಕುಟುಂಬದವರು ಒಟ್ಟಾಗಿ ಬರ್ತ್ ಡೇ ಆಚರಿಸಲು ನಿರ್ಧರಿಸಿದ್ದರು. ಅದರಂತೆ ಬಾಲಕಿ ಮತ್ತು ಕುಟುಂಬದವರನ್ನು ನೆರೆಮನೆಯವರು ಆಹ್ವಾನಿಸಿದ್ದರು.
ಮಧ‍್ಯರಾತ್ರಿ ಬರ್ತ್ ಡೇ ಪಾರ್ಟಿ ಮುಗಿದ ಬಳಿಕ ಬಾಲಕಿ ಮತ್ತೆ ಪಾತ್ರೆ ಮರಳಿಸಲು ನೆರೆಮನೆಗೆ ಹೋಗಿದ್ದಾಗ ಅಲ್ಲಿದ್ದ ಕಾಮುಕ ಆಕೆಯನ್ನು ಕೊಠಡಿಯೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಆಕೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಅದರಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ.