Publish Date: Sat, 28 Jul 2018 (17:48 IST)
Updated Date: Sat, 28 Jul 2018 (17:51 IST)
ಸಚಿವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದ ವೇಳೆ ನಗರಸಭೆ ಸದಸ್ಯರೊಂದಿಗೆ ಅಲ್ಲಿನ ಕಿರಿಯ ಇಂಜಿನಿಯರ್ ಒಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ನಗರಸಭೆ ವತಿಯಿಂದ ಸ್ಥಳೀಯ ಶಾಸಕರೂ, ಹಿಂದುಳಿದ ವರ್ಗಗಳ ಸಚಿವರೂ ಆದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಭೆ ಆರಂಭವಾಯ್ತು. ಈ ವೇಳೆ ನಗರಸಭಾ ಸದಸ್ಯ ಚಿನ್ನಸ್ವಾಮಿ, ಅಲ್ಲಿನ ಕಿರಿಯ ಇಂಜಿನಿಯರ್ ಬಸವರಾಜು ಅವರನ್ನು ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ್ರು.
ಈ ವೇಳೆ ಜೆಇ ಬಸವರಾಜ್ ಸಹ ನಗರಸಭಾ ಸದಸ್ಯರೊಂದಿಗೆ ವಾಗ್ದಾಳಿಗೆ ಇಳಿದಿದ್ದು, ಏಕವಚನದಲ್ಲೇ ನಿಂದಿಸಿದ್ದಾರೆ. ಈ ಕುರಿತಂತೆ ನಗರಸಭಾ ಸದಸ್ಯ ಚಿನ್ನಸ್ವಾಮಿ ಪ್ರತಿಕ್ರಿಯಿಸಿ, ಜೆಇ ಬಸವರಾಜ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ವ್ಯಕ್ತಿ. ಆತ ಸೋಮಾರಿ ಅವರನ್ನು ಇಲ್ಲಿಂದ ಬೇರೆಡೆ ವರ್ಗ ಮಾಡ್ಬೇಕೆಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ರು. ಕಿರಿಯ ಇಂಜಿನಿಯರ್ ಬಸವರಾಜ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಗರಸಭೆ ಸದಸ್ಯರು ನನ್ನನ್ನ ಬೈಯ್ದಿದ್ದರಿಂದ ನಾನೂ ಬೈದಿದ್ದೇನೆ ಎಂದಿದ್ದಾರೆ.