Publish Date: Tue, 24 Jul 2018 (15:46 IST)
Updated Date: Tue, 24 Jul 2018 (15:53 IST)
ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಜಮೀನು ಪೋಡಿ ಮಾಡಲು ರೈತನಿಂದ ಹಣ ಪಡೆಯುತ್ತಿದ್ದ ಭೂ ಮಾಪಕ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕು ಕಛೇರಿ ಅಧಿಕಾರಿ ಚಂದಾಪುರದ ಬಳಿ ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಜಮೀನು ಪೋಡಿ ಮಾಡಲು ರೈತನಿಂದ ಹಣ ಪಡೆಯುತ್ತಿದ್ದ ಭೂ ಮಾಪಕ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಭೂ ಮಾಪಕ ಭಾಸ್ಕರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಸರ್ಜಾಪುರ ಹೋಬಳಿ ನಾರಯಣಘಟ್ಟ ನಿವಾಸಿ ಶ್ರೀನಿವಾಸ್ ರವರ ಜಮೀನಿನ ಪೋಡಿ ಮಾಡಿಸುವ ಸಲುವಾಗಿ 30 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳಾದ ಕೊದಂಡರಾಮ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ.