Publish Date: Thu, 10 May 2018 (18:20 IST)
Updated Date: Thu, 10 May 2018 (18:26 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜನಾರ್ಧನ ರೆಡ್ಡಿಯವರನ್ನು ಹೊರತರಲು ನ್ಯಾಯಮೂರ್ತಿ ಸಿಜೆಐ ಬಾಲಕೃಷ್ಣನ್ ಸಂಬಂಧಿಕರಿಗೆ ಭಾರೀ ಮೊತ್ತದ ಹಣ ಆಮಿಷ ಒಡ್ಡಲಾಗಿತ್ತಾ?
ಹೀಗೊಂದು ದೇಶವೇ ಬೆಚ್ಚಿ ಬೀಳುವಂತಹ ಹಗರಣವೊಂದು ಬೆಳಕಿಗೆ ಬಂದಿದೆ. ಜನಾರ್ಧನ ರೆಡ್ಡಿ ಬಿಡುಗಡೆಗೆ ಅವರ ಸ್ನೇಹಿತ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ರೆಡ್ಡಿ ಪರ ವಕೀಲರು ನ್ಯಾಯಮೂರ್ತಿ ಬಾಲಕೃಷ್ಣ ಅವರ ಅಳಿಯ ಶ್ರೀನಿಜಿ ಜತೆಗೆ 160 ಕೋಟಿ ರೂ.ಗಳ ಡೀಲ್ ಕುದುರಿಸಿದ್ದರು ಎಂಬ ವರದಿಯನ್ನು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
2010 ರಲ್ಲಿ ಈ ಪ್ರಕರಣ ನಡೆದಿತ್ತು. ಈ ಸಂದರ್ಭದಲ್ಲಿ ಶ್ರೀರಾಮುಲು ಬಿಜೆಪಿ ಸರ್ಕಾರದ ಸಚಿವರಾಗಿದ್ದರು. ಇದೀಗ ಈ ಡೀಲ್ ಕುದುರಿಸುವ ದೃಶ್ಯಗಳ ವಿಡಿಯೋವನ್ನು ಖಾಸಗಿ ವಾಹಿನಿ ವರದಿ ಮಾಡಿದ್ದು, ಮಧ್ಯವರ್ತಿಗಳಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ವರ್ಚಸ್ಸಿಗೆ ಇದು ನಿಜಕ್ಕೂ ದೊಡ್ಡ ಹೊಡೆತ ನೀಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.