Publish Date: Mon, 30 Apr 2018 (09:17 IST)
Updated Date: Mon, 30 Apr 2018 (09:19 IST)
ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎದುರಾಳಿಯಾಗಿ ಬಿಜೆಪಿಯಿಂದ ಬಾದಾಮಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರುವ ಬಿ. ಶ್ರೀರಾಮುಲು ಯೋಜನೆ ರೂಪಿಸಿದ್ದಾರೆ.
ಬಳ್ಳಾರಿ ಗಣಿ ದಣಿಗಳ ಪರಮ ಮಿತ್ರ ಶ್ರೀರಾಮುಲು ಬಾದಾಮಿಯಲ್ಲೇ ಮನೆ ಮಾಡಲು ಯೋಜನೆ ಮಾಡಿದ್ದಾರೆ. ಇಲ್ಲೇ ಮನೆ ಮಾಡಿಕೊಂಡು ಮತದಾರರ ಮನ ಒಲಿಸಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಬಾದಾಮಿಯಲ್ಲಿ ಶ್ರೀರಾಮುಲು ತಳ ಮಟ್ಟದಿಂದಲೇ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಶ್ರೀರಾಮುಲುಗೆ ಇದು ಪ್ರತಿಷ್ಠೆಯ ಕಣವಾಗಿದ್ದು, ಸಿದ್ದರಾಮಯ್ಯ ಸೋಲಿಸುವುದಾಗಿ ಈಗಾಗಲೇ ರಾಮುಲು ಶಪಥ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.