ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್ ಅವರ ಪತ್ನಿಗೆ ಡಿಜಿಟರ್ ಅರೆಸ್ಟ್ ಮಾಡಿದ ಸೈಬರ್ ವಂಚಕರು ಬರೋಬ್ಬರಿ 14ಲಕ್ಷ ವಂಚನೆ ಮಾಡಿದ್ದಾರೆ.
ವೈದ್ಯರಾಗಿರುವ ಸಂಸದರ ಪತ್ನಿಗೆ ಹೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ ಹಣ ಕಿತ್ತು ಸೈಬರ್ ಚೋರರು ಸವಾಲೆಸೆದಿದ್ದಾರೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ 3 ಲಕ್ಷ ಹಣವನ್ನ ಸೈಬರ್ ಚೋರರು ವಂಚಿಸಿದ್ರು. ಇದೀಗ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಪತ್ನಿ, ವೃತ್ತಿಯಲ್ಲಿ ವೈದ್ಯೆಯಾಗಿರೊ ಡಾ ಪ್ರೀತಿ ರವರಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 14 ಲಕ್ಷ ವಂಚಿಸಿದ್ದಾರೆ.
ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಡಿಸಿಪಿ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಣ ಹಾಕಿದ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಖಾತೆಯಿಂದ 14 ಲಕ್ಷ ರೂ. ಹಣವನ್ನು ಪ್ರೀತಿ ಅವರಿಗೆ ನೀಡಲಾಗಿದ್ದು ಸೈಬರ್ ಕಳ್ಳರ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.