ಮೈಸೂರು: ಸಾಕಷ್ಟು ವಿವಾದಗಳ ನಡುವೆಯೂ ಸಾಹಿತಿ ಬಾನು ಮುಷ್ತಾಕ್ ಇಂದು ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ರೇಷ್ಮೆ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಬಾನು ಮುಷ್ತಾಕ್ ಹಾರ ಹಾಕಿಸಿಕೊಂಡು, ಗೌರವ ಸ್ವಿಕರಿಸಿದ್ದಾರೆ.
ಇಂದು 10.10 ರ ಮುಹೂರ್ತದಲ್ಲಿ ಪುಷ್ಪಾರ್ಚನೆ ಮಾಡಿ ಬಾನು ಮುಷ್ತಾಕ್ ಅಧಿಕೃತವಾಗಿ ದಸರಾಗೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನೆ ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಿದ್ದಾರೆ.
ಚಾಮುಂಡಿ ತಾಯಿಯ ಮುಂದೆ ಬಾನು ಮುಷ್ತಾಕ್ ಗೆ ರೇಷ್ಮೆ ಸೀರೆ ನೀಡಿ ಗೌರವಿಸಿದಾಗ ಬಾನು ಮುಷ್ತಾಕ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ. ಬಿಜೆಪಿ, ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಅವರು ಇಂದು ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ.
ಓರ್ವ ಮುಸ್ಲಿಂ ಧರ್ಮೀಯರು ಎನ್ನುವ ಕಾರಣಕ್ಕೆ ಅವರನ್ನು ಉದ್ಘಾಟನೆಗೆ ಕರೆಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಂಸದ ಪ್ರತಾಪ್ ಸಿಂಹ ಕೋರ್ಟ್ ಗೂ ಹೋಗಿದ್ದರು. ಆದರೆ ಕೋರ್ಟ್ ನಲ್ಲಿ ಅವರಿಗೆ ಹಿನ್ನಡೆಯಾಗಿತ್ತು.