ಬೆಂಗಳೂರು: ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ ಎಂಬ ವರದಿಗಳ ಬಗ್ಗೆ ಈಗ ಸ್ವತಃ ಸಿಎಂ ಕಚೇರಿಯಿಂದಲೇ ಸ್ಪಷ್ಟನೆ ಬಂದಿದೆ.
ಸಿಎಂ ಸಿದ್ದರಾಮಯ್ಯನವರೇ ಸೋನಿಯಾ ಗಾಂಧಿಗೆ ದಸರಾ ಉದ್ಘಾಟನೆಗೆ ಆಗಮಿಸುವಂತೆ ಪತ್ರ ಬರೆದಿದ್ದಾರೆ. ಆದರೆ ಸೋನಿಯಾ ಇದಕ್ಕೆ ಉತ್ತರಿಸಿಲ್ಲ. ಹೀಗಾಗಿ ಸ್ವತಃ ಸಿಎಂ ಅವರೇ ದೆಹಲಿಗೆ ತೆರಳಿ ಆಹ್ವಾನ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ಹಲವರು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ದಸರಾ ಎನ್ನುವುದು ನಮ್ಮ ಕನ್ನಡ ನಾಡಿನ ಸಂಸ್ಕೃತಿ ಪ್ರತೀಕ. ಈ ಕಾರ್ಯಕ್ರಮಕ್ಕೆ ನಮ್ಮದೇ ನಾಡಿನ ಗಣ್ಯರನ್ನು ಕರೆಸುವುದು ಬಿಟ್ಟು ರಾಜಕೀಯ ಯಾಕೆ ಬೆರೆಸುತ್ತೀರಿ ಎಂದು ಜನರಿಂದ ಟೀಕೆ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಕಚೇರಿ ಈಗ ಸ್ಪಷ್ಟನೆ ನೀಡಿದೆ. ದಸರಾಗೆ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ ಎನ್ನುವುದು ಕಾಲ್ಪನಿಕ ಮತ್ತು ಸತ್ಯಕ್ಕೆ ದೂರವಾದ ಸುದ್ದಿ. ಆ ರೀತಿಯ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.