ಮೈಸೂರು: ಇಂದು ಖ್ಯಾತ ಸಾಹಿತಿ ಬಾನು ಮುಷ್ತಾಕ್ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ಅವರು ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದಾಗ ಅರಿಶಿನ ಕುಂಕುಮ ಲೇಪಿಸಿ ಕನ್ನಡವನ್ನು ಭುವನೇಶ್ವರಿ ಮಾಡಿದಿರಿ ಎಂದಿದ್ದ ಹಳೆಯ ವಿಡಿಯೋ ವೈರಲ್ ಆಗಿತ್ತು. ಇಂದು ಅವರು ದಸರಾ ವೇದಿಕೆಯಲ್ಲಿ ಅರಿಶಿನ ಕುಂಕುಮದ ಬಗ್ಗೆ ಏನು ಹೇಳಿದ್ದಾರೆ ನೋಡಿ.
ಇಂದು ಶುಭ ಮುಹೂರ್ತದಲ್ಲಿ ದಸರಾಗೆ ಚಾಲನೆ ನೀಡಿದ ಬಾನು ಮುಷ್ತಾಕ್ ಬಳಿಕ ವೇದಿಕೆಯಲ್ಲಿ ಮಾತನಾಡಿದ್ದಾರೆ. ಕವನವೊಂದನ್ನು ವಾಚಿಸುವ ಮೂಲಕ ಅರಿಶಿನ ಕುಂಕುಮದ ಬಗ್ಗೆ ಗೌರವದ ಮಾತನಾಡಿದ್ದಾರೆ. ನನಗೆ ಮಂಗಳಾರತಿ ಸ್ವೀಕರಿಸುವುದು ಪುಷ್ಪಾರ್ಚನೆ ಮಾಡುವುದು ಹೊಸದಲ್ಲ. ನೂರಾರು ಸಾರಿ ಮಾಡಿದ್ದೇನೆ. ಸಂಸ್ಕೃತಿ ಎಂದರೆ ಧ್ವೇಷ ಬೆಳೆಸುವುದಲ್ಲ, ಪ್ರೀತಿಯನ್ನು ಹರಡುವುದು ಎಂದಿದ್ದಾರೆ.
10 ವರ್ಷಗಳ ಹಿಂದೆ ತಾವು ಬರೆದಿದ್ದ ಬಾಗಿನ ಎನ್ನುವ ಕವನ ವಾಚನ ಮಾಡಿದ ಬಾನು ಮುಷ್ತಾಕ್, ಮುಸ್ಲಿಂ ಮಹಿಳೆ ಬಾಗಿನ ಪಡೆದಾಗ ಆಗುವ ಭಾವನೆಗಳನ್ನು ಈ ಕವನದಲ್ಲಿ ಹಂಚಿಕೊಂಡಿದ್ದೇನೆ ಎಂದಿದ್ದಾರೆ. ಈ ಕವನದಲ್ಲಿ ಸಾಬರ ಮಗಳಿಗೆ ಬಾಗಿನದ ಪ್ರೀತಿಯ ಮೊರ ಎಂದು ಕವನ ವಾಚನ ಮಾಡುವ ಮೂಲಕ ತಮ್ಮನ್ನು ವಿರೋಧಿಸಿದವರಿಗೆ ತಿರುಗೇಟು ನೀಡಿದ್ದಾರೆ.