Select Your Language

Notifications

webdunia
webdunia
webdunia
webdunia

ಯೋಗೇಶ್ವರ್‌ಗೆ ಮಾನ ಮರ್ಯಾದೆ ಇದ್ದರೆ ಭಗೀರಥನೆಂದು ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಡಿವಿಎಸ್‌

former CM Sadananda Gowda

Sampriya

ರಾಮನಗರ , ಶುಕ್ರವಾರ, 25 ಅಕ್ಟೋಬರ್ 2024 (14:21 IST)
Photo Courtesy X
ರಾಮನಗರ: ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಮೂಲಕ  ₹150 ಕೋಟಿ ಅನುದಾನವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಿದೆ. ಅದರ ಫಲವಾಗಿ ಇಲ್ಲಿನ ಕೆರೆಗಳು ತುಂಬಿವೆ. ಅದಕ್ಕೆ ಕಾರಣವಾದ ನಾನು ಭಗೀರಥನೇ ಹೊರತು ಯೋಗೇಶ್ವರ್ ಅಲ್ಲವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಿದ ಕ್ರೆಡಿಟ್‌ ನನಗೆ ಸೇರಬೇಕು. ಯೋಗೇಶ್ವರ್ ಅದರ ಕ್ರೆಡಿಟ್ ತೆಗೆದುಕೊಂಡು ಭಗೀರಥ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಾಗೆ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ ಎಂದು ಅವರು ಸವಾಲು ಹಾಕಿದರು.

ಆರನೇ ಸಲ ಪಕ್ಷಾಂತರ ಮಾಡಿ ಈಗ ಕಾಂಗ್ರೆಸ್ ಸೇರಿರುವ ಯೋಗೇಶ್ವರ್ ನಡೆ, ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಇಡಬೇಕು ಎಂಬುದು ದೊಡ್ಡ ಪಾಠ. ನಾವು ಈ ಭಾಗದಲ್ಲಿ ಅವರ ಮೇಲೆ ಅವಲಂಬಿನೆ ಆಗಿದ್ದು ನಿಜ. ಈಗ ಅವರು ಮಾಡಿರುವ ದ್ರೋಹಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದರು.

ಈ ಉಪ ಚುನಾವಣೆ ನಮಗೆ ದೊಡ್ಡ ಸವಾಲು. ಇಲ್ಲಿ ವ್ಯಕ್ತಿಯೇ ಪಕ್ಷ ಎಂದು ಬಿಂಬಿಸಿಕೊಂಡು ಪ್ರತಿ ಸಲ ಸ್ಚಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಯೋಗೇಶ್ವರ್ ರಾಜಕಾರಣದಲ್ಲಿ ಇರಬೇಕೊ ಬೇಡವೊ ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮಾಡಿ ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ