Select Your Language

Notifications

webdunia
webdunia
webdunia
webdunia

ಗೀಸರ್‌ನಿಂದ ತಾಯಿ, ಮಗು ಉಸಿರುಗಟ್ಟಿ ಸಾವು!

ಗೀಸರ್‌ನಿಂದ ತಾಯಿ, ಮಗು ಉಸಿರುಗಟ್ಟಿ ಸಾವು!
ಬೆಂಗಳೂರು , ಸೋಮವಾರ, 17 ಜನವರಿ 2022 (06:46 IST)
ಬೆಂಗಳೂರು : ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗು ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಸಿಲಿಕಾನ್ ಸಿಟಿಯ ಚಿಕ್ಕಬಾಣಾವರದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಮಂಗಳಾ(35) ಹಾಗೂ ಮಗಳು ಗೌತಮಿ(7) ಎಂದು ಗುರುತಿಸಲಾಗಿದೆ. ಮಂಜುಳಾ ಪತಿ ಕೆಲಸಕ್ಕೆ ತೆರಳಿದ ಬಳಿಕ ಈ ಅವಘಢ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳಾ ಅವರು ಗ್ಯಾಸ್ ಗೀಸರ್ ಆನ್ ಮಾಡಿ ಮಗಳು ಗೌತಮಿಗೆ ಸ್ನಾನ ಮಾಡಿಸಲೆಂದು ಹೋಗಿದ್ದರು. ಈ ವೇಳೆ ಗೀಸರ್ ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಇಡೀ ಕೊಠಡಿ ಆವರಿಸಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೆ ಅಮ್ಮ-ಮಗಳು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು.  ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರ ಗಡಿ ದಾಟಿದ ಕೊರೊನಾ ಕೇಸ್!