Publish Date: Sat, 15 Jan 2022 (15:10 IST)
Updated Date: Sat, 15 Jan 2022 (15:13 IST)
ದೊಡ್ಡಬಳ್ಳಾಪುರ : ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿ, ಮೂರ್ಚೆ ರೋಗ ಬಂದು ಸಾವನ್ನಪ್ಪಿದ್ದಾನೆ ಎಂದು ನಂಬಿಸಿ ನಾಪತ್ತೆಯಾಗಿದ್ದ ಪತ್ನಿ ಶೈಲಜಾ,
ಪ್ರಿಯಕರ ಹನುಮಂತ, ಅತ್ತೆ ಲಕ್ಷ್ಮೀ ದೇವಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆಯನ್ನು ಕೊಲೆ ಮಾಡಿದ ಕೃತ್ಯವನ್ನು ಕಣ್ಣಾರೆ ಕಂಡ ಹತ್ತು ವರ್ಷದ ಮಗನ ಪವನ್ ನೀಡಿದ ಮಾಹಿತಿ ಮೇರೆಗೆ ಕೊಲೆಗೈದು ಪಕ್ಕದ ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆತನ ಪತ್ನಿ ಶೈಲಜಾ, ಆಕೆಯ ತಾಯಿ ಲಕ್ಷ್ಮೀದೇವಮ್ಮ,
ಪ್ರಿಯಕರ ಹನುಮಂತ ಎಂಬಾತನನ್ನು ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಗೋವಿಂದ ತಂಡ ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 27ರಂದು ಶೈಲಜಾ ಪತಿ ಸಾವಿನ ಬಗ್ಗೆ ಬಾಮೈದ ಚಂದ್ರಶೇಖರ್ಗೆ ಕರೆ ಮಾಡಿ ತಿಳಿಸಿದ್ದರು. ಮನೆಯ ಪಕ್ಕದಲ್ಲೇ ಇದ್ದ ಚಂದ್ರಶೇಖರ್ ಬಂದಾಗ, ಮೂರ್ಛೆ ರೋಗ ಬಂದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆಂದು ತಿಳಿಸಿದ್ದರು.