ಹೈದರಾಬಾದ್: ನಿತ್ಯ ಕುಡಿದು ಬರುತ್ತಿದ್ದ ಗಂಡನ ವರ್ತನೆಯಿಂದ ಬೇಸತ್ತ ಮಹಿಳೆ ಆತನೊಂದಿಗೆ ಜಗಳವಾಡಿ ಕೋಪದ ಭರದಲ್ಲಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
35 ವರ್ಷದ ಶೇಖ್ ಅಪ್ರೋಜ್ ಎಂಬಾತ ಕುಡಿದು ಬರುತ್ತಿದ್ದ. ಇದು ಹೆಂಡತಿಯ ಸಿಟ್ಟಿಗೆ ಕಾರಣವಾಗಿತ್ತು. ಈ ಬಗ್ಗೆ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಇದೇ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾಳೆ.
ಈ ಬಗ್ಗೆ ಶೇಖ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ದಂಪತಿ ನಡುವೆ ಕಳೆದ ಕೆಲವು ಸಮಯದಿಂದ ವೈಮನಸ್ಯವಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.