ಭೋಪಾಲ್: ಕಾರಿಗೆ ತಳ್ಳುಗಾಡಿ ತಾಕಿದ್ದಕ್ಕೆ ಕೋಪಗೊಂಡ ಮಹಿಳೆ ಬಡಪಾಯಿ ವ್ಯಾಪಾರಿಯ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಬಿಸಾಕಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಮಧ‍್ಯಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಕೋಪಕ್ಕೆ ತಳ್ಳುಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಬಡಪಾಯಿ ಬಳಿ ಬಂದ ಮಹಿಳೆ ಆತನೊಂದಿಗೆ ಜಗಳಕ್ಕಿಳಿಯುತ್ತಾಳೆ. ಬಳಿಕ ಆತನ ಗಾಡಿಯಲ್ಲಿ ಪಪ್ಪಾಯಿಗಳನ್ನು ರಸ್ತೆಗೆಸೆಯುತ್ತಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!