ಮಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಯುವಜನಾಂಗ ಸಣ್ಣ ಪುಟ್ಟದಕ್ಕೆಲ್ಲಾ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಮಂಗಳೂರಿನಲ್ಲಿ ಯುವಕನೊಬ್ಬ ಕ್ಷುಲ್ಲುಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಳಾಯಿಯಲ್ಲಿ ಸನ್ ರೈಸ್ ಕಾರ್ಪೋರೇಷನ್ ಕಚೇರಿಯಲ್ಲಿ ನೌಕರನಾಗಿದ್ದ 26 ವರ್ಷದ ಯುವಕ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಚಿತ್ರ ಡೆತ್ ನೋಟ್ ಬರೆದಿಟ್ಟಿದ್ದಾನೆ.
ಕಚೇರಿಯೊಳಗೇ ನೇಣಿಗೆ ಶರಣಾದ ಯುವಕ ಸಾವಿಗೆ ಮುನ್ನ ಡೆತ್ ನೋಟ್ ಬರೆದಿದ್ದು, ಇದರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರಿಗಾದರೂ ನನ್ನಿಂದ ಹಣಕಾಸಿನ ತೊಂದರೆಯಾಗಿದ್ದರೆ ಕ್ಷಮಿಸಿ. ಆನ್ ಲೈನ್ ಲೋನ್ ನವರು ಕರೆ ಮಾಡಿದ್ರೆ ನಾನು ಸತ್ತೋಗಿದ್ದೇನೆ ಎಂದು ತಿಳಿಸಿ ಎಂದು ಬರೆದಿದ್ದಾನೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!