Select Your Language

Notifications

webdunia
webdunia
webdunia
webdunia

ಮದುವೆ ಮನೆಯಲ್ಲಿ ಹಾಡು ಕೇಳಿ ವಿಚ್ಛೇದನ ನೀಡಿದ ವರ!

ಮದುವೆ ಮನೆಯಲ್ಲಿ ಹಾಡು ಕೇಳಿ ವಿಚ್ಛೇದನ ನೀಡಿದ ವರ!
ಬಾಗ್ದಾದ್ , ಮಂಗಳವಾರ, 11 ಜನವರಿ 2022 (09:50 IST)
ಬಾಗ್ದಾದ್: ಮದುವೆ ಮನೆಯಲ್ಲಿ ಹಾಕಿದ ಹಾಡು ಕೇಳಿ ಆಕ್ರೋಶಗೊಂಡ ವರ ಮದುವೆ ಮಂಟಪದಲ್ಲಿಯೇ ಆಗತಾನೇ ಮದುವೆಯಾದ ನವವಧುವಿಗೆ ವಿಚ್ಛೇದನ ನೀಡಿದ ಘಟನೆ ಬಾಗ್ದಾದ್ ನಲ್ಲಿ ನಡೆದಿದೆ.

ಸಿರಿಯನ್ ಭಾಷೆಯ ಹಾಡಿನಲ್ಲಿ ‘ನಾನು ನಿನ್ನನ್ನು ನಿಯಂತ್ರಿಸುತ್ತೇನೆ’ ಎಂಬರ್ಥದ ಸಾಲುಗಳಿವೆಯಂತೆ. ಇದುವೇ ವರನ ಆಕ್ರೋಶಕ್ಕೆ ಕಾರಣವಾಗಿರುವುದು.

ವಧುವಿನ ಮನೆಯವರು ಪ್ರಚೋದನಕಾರಿ ಹಾಡು ಹಾಕಿದ್ದಾರೆಂದು ವರ ಸ್ಥಳದಲ್ಲಿಯೇ ತಲಾಖ್ ನೀಡಿದ್ದಾನೆ. ಹಾಡು ಕೇಳಿ ವರನ ಮನೆಯವರು ವಧುವಿನ ಮನೆಯವರ ಜೊತೆ ವಾಗ್ವಾದಕ್ಕಿಳಿದಿದ್ದರು. ಬಳಿಕ ತಲಾಖ್ ನಡೆದಿದೆ. ಈ ಘಟನೆ ಈಗ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಚರ್ಚೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನು ಹೊಡೆದು, ಸುಟ್ಟು ಹಾಕಿದ ತಾಯಿ! ಮುಂದೇನಾಯ್ತು?