Publish Date: Tue, 11 Jan 2022 (11:27 IST)
Updated Date: Tue, 11 Jan 2022 (10:08 IST)
ಮೈಸೂರು: ಜಗತ್ತಿನಲ್ಲಿ ಕೆಟ್ಟ ತಾಯಿ ಇರಲಾರಳು ಎಂಬ ಮಾತನ್ನು ಸುಳ್ಳು ಮಾಡಿದ್ದಾಳೆ ಈ ತಾಯಿ. ತನ್ನ ನಾಲ್ಕು ವರ್ಷದ ಮುಗ್ಧ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ!
ಐದು ವರ್ಷದ ಹಿಂದೆ ಮಹಿಳೆಗೆ ಮದುವೆಯಾಗಿ ಈಗ ನಾಲ್ಕು ವರ್ಷದ ಮಗನಿದ್ದಾನೆ. ಇತ್ತೀಚೆಗೆ ಮೈಮೇಲೆ ದೇವರು ಬರುತ್ತಾಳೆ ಎಂದು ವಿಚತ್ರವಾಗಿ ನಡೆದುಕೊಳ್ಳುತ್ತಿದ್ದಳು. ಮಾನಸಿಕ ಅಸ್ವಸ್ಥೆಯಂತೆ ನಡೆದುಕೊಳ್ಳುತ್ತಿದ್ದ ಈಕೆ ಇತ್ತೀಚೆಗೆ ಗಂಡನೊಂದಿಗೆ ಜಗಳವಾಡಿ ತವರಿಗೆ ಹೋಗಿದ್ದಳು. ಆದರೆ ಮತ್ತೆ ಪತಿಯೇ ವಾಪಸ್ ಕರೆತಂದಿದ್ದ.
ಇದೀಗ ಪತಿ ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ ಮಗನ ತಲೆ ಮೇಲೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಈ ಭೀಕರ ಕೃತ್ಯ ನೋಡಿ ಬೆಚ್ಚಿದ್ದ ಸ್ಥಳೀರು ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಮಗು ಬದುಕುಳಿಯಲಿಲ್ಲ. ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.