ಹೈದರಾಬಾದ್ : ಪತಿಯೊಂದಿಗೆ ಜಗಳವಾಡುತ್ತಾ ಆತನ ಕತ್ತು ಹಿಸುಕು ಕೊಂದಿರುವ ಘಟನೆ ಸೋಮವಾರ ರಾತ್ರಿ ಅಜ್ಜಂಪುರ ಕಾಲೋನಿಯಲ್ಲಿ ನಡೆದಿದೆ.
ಶೇಖ್ ಅಫ್ರೋಜ್(35) ಮೃತನಾಗಿದ್ದಾನೆ. ಫರ್ಜಾನಾ ಬೇಗಂ ಪತಿಯನ್ನು ಕೊಂದ ಆರೋಪಿ. ಪತಿ ಕುಡಿದ ಮತ್ತಿನಲ್ಲಿ ಮನೆಗೆ ಬರುತ್ತಿದ್ದನು. ಆತನೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಫರ್ಜಾನಾ ಒಂದು ದಿನ ಪತಿಯ ಕತ್ತು ಹಿಸುಕಿ ಕೊಂದಿದ್ದಾಳೆ.
ಶೇಖ್ ಅಫ್ರೋಜ್ ಸಣ್ಣ ವ್ಯಾಪಾರವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ದಂಪತಿಗಳ ನಡುವೆ ಕೆಲವು ವಿಚರಗಳಿಗೆ ಮನಸ್ಥಾಪವಿತ್ತು. ಈ ವಿಚಾವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿದೆ. ಶೇಖ್ ಅವರಿಗೆ ಫರ್ಜಾನಾ ಎರಡನೇ ಪತ್ನಿಯಾಗಿದ್ದಾಳೆ. ಆಕೆ ಬಟ್ಟೆಯಯಲ್ಲಿ ಶೇಖ್ ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಕೊಲೆಗೆ ಸಂಬಂಧಿಸಿದಂತೆ ಶೇಖ್ ಸಹೋದರ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಫರ್ಜಾನಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!