Select Your Language

Notifications

webdunia
webdunia
webdunia
webdunia

ಸ್ನೇಹಿತರಿಂದಲೇ ಗೆಳತಿ ಮೇಲೆ ಗ್ಯಾಂಗ್ ರೇಪ್!

ಸ್ನೇಹಿತರಿಂದಲೇ ಗೆಳತಿ ಮೇಲೆ ಗ್ಯಾಂಗ್ ರೇಪ್!
ನವದೆಹಲಿ , ಸೋಮವಾರ, 3 ಜನವರಿ 2022 (20:29 IST)
ಅಂಬರನಾಥ್ :  ಇದೊಂದು ಘೋರ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.  ಗೆಳೆಯರು ಎನಿಸಿಕೊಂಡವರೇ ಸ್ನೇಹಿತೆಯ ಮೇಲೆ ಎರಗಿದ್ದು ಪೊಲೀಸರು ಆರೋಪಿಗಳನ್ನು  ಬಂಧಿಸಿದ್ದಾರೆ. 

21 ವರ್ಷದ ಯುವತಿ  ಮೇಲೆ ಸಾಮೂಹಿಕ  ಅತ್ಯಾಚಾರವಾಗಿದೆ. ಶಿವಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಥಾಣೆ ಜಿಲ್ಲೆಯ ಅಂಬರನಾಥ್ನ ಜಿಐಪಿ ಅಣೆಕಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಸಂತ್ರಸ್ತೆ ಕಲ್ಯಾಣ್ ನಿವಾಸಿಯಾಗಿದ್ದು, ಅಂಬರನಾಥದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದಗ್ದರು. ಆಕೆಯ ಸ್ನೇಹಿತ ಹನುಮಾನ್ ಹಿಲಮ್ ತನ್ನ ಸ್ನೇಹಿತರಾದ ವಿಶ್ವಾಸ್ ಮಾಧವಿ ಮತ್ತು ಜಾವೇದ್ ಅನ್ಸಾರಿ ಅವರೊಂದಿಗೆ ಭಾನುವಾರ ಜಿಐಪಿ ಅಣೆಕಟ್ಟು ಪ್ರದೇಶದಲ್ಲಿ ಮದ್ಯ ಸೇವನೆ ಮಾಖಡಿದ್ದಾರೆ.

 ಇದೇ ವೇಳೆ ಹನುಮಂತ ಜಿಐಪಿ ಅಣೆಕಟ್ಟೆ ಪ್ರದೇಶಕ್ಕೆ ಯುವತಿಯನ್ನು ಬರಹೇಳಿದ್ದಾರೆ.  ಯುವತಿ ಇವರ ಮಾತು ನಂಬಿ ಅಲ್ಲಿಗೆ ಹೋದಾಗ ಆಕೆ ಮೇಲೆ ಎರಗಿದ್ದಾರೆ.

ಹನುಮಾನ್ ಮೊದಲು ಆಕೆ ಮೇಲೆ ಕ್ರೌರ್ಯ ಮೆರೆದಿದ್ದು  ನಂತರ  ಆರೋಪಿಯ ಸ್ನೇಹಿತರಾದ ವಿಶ್ವಾಸ್ ಮತ್ತು ಜಾವೇದ್ರಿಂದ ಅತ್ಯಾಚಾರವೆಸಗಿದ್ದಾರೆ.  ಘಟನೆಯ ನಂತರ ಯುವತಿ ಶಿವಾಜಿನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆಕೆಯ ದೂರಿನ ಮೇರೆಗೆ ಪೊಲೀಸರು ಕೂಡಲೇ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಪತ್ತೆ ಹಚ್ಚಿ  ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಎದುರೇ ವೇದಿಕೆಯಲ್ಲೇ ಸಚಿವ ಅಶ್ವತ್ಥ ನಾರಾಯಣ​- ಸಂಸದ ಡಿ.ಕೆ. ಸುರೇಶ್​ ಜಟಾಪಟಿ