Daily Horoscope

Select Your Language

Notifications

webdunia
webdunia
webdunia
webdunia

ಭೀಕರ ಘಟನೆ : ಬೆಂಕಿ ಹೊತ್ತಿಕೊಂಡು ರಸ್ತೆಯಲ್ಲಿ ಓಡಿದ ದಂಪತಿ! ಮುಂದೇನಾಯ್ತು?

ಕೊಲ್ಕತ್ತಾ
ಕೊಲ್ಕತ್ತಾ : ಮೈಗೆ ಬೆಂಕಿ ಹೊತ್ತಿಕೊಂಡಿದ್ದರೂ ಗಂಡ-ಹೆಂಡತಿ ರಸ್ತೆಯ ತುಂಬ ಓಡಾಡಿ, ಚೀರಾಡುತ್ತಾ ಆತಂಕ ಸೃಷ್ಟಿಸಿರುವ ಆಘಾತಕಾರಿ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ನ್ಯೂಟೌನ್ನ ಘುನಿ ಪ್ರದೇಶದ ಸ್ಥಳೀಯರ ಪ್ರಕಾರ, ಅರೆ ಸುಟ್ಟ ಸ್ಥಿತಿಯಲ್ಲಿದ್ದ ದಂಪತಿಗಳು ತಮ್ಮ ಅಪಾರ್ಟ್‌ಮೆಂಟ್‌ನಿಂದ ಬೀದಿಗೆ ಓಡಿ ಬಂದಿದ್ದಾರೆ. ಗಾಳಿಗೆ ಬೆಂಕಿ ಇನ್ನೂ ಹೆಚ್ಚಾಗಿ ಉರಿಯುತ್ತಿದ್ದಂತೆ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದರಿಂದ ರಸ್ತೆಯಲ್ಲಿ ಕಿರುಚಾಡುತ್ತಿದ್ದ ಆ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬೆಂಕಿ ಹೊತ್ತಿಕೊಂಡಿದ್ದ ಆ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆರ್‌ಜಿ ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಗಂಡ-ಹೆಂಡತಿ ಕಳೆದ ನಾಲ್ಕು ವರ್ಷಗಳಿಂದ ಅಪಾರ್ಟ್ಮೆಂಟ್ನ ಕಟ್ಟಡದಲ್ಲಿ ವಾಸಿಸುತ್ತಿದ್ದರು.

ಮೂಲಗಳ ಪ್ರಕಾರ, ಶಕೀಲಾ ಸುಲ್ತಾನಾ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಆಕೆಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ಆಕೆಯ ಗಂಡ ಆಕೆಯನ್ನು ರಕ್ಷಿಸಲು ಹೋದಾಗ, ಆತನಿಗೆ ಕೂಡ ಬೆಂಕಿ ಆವರಿಸಿದೆ ಎನ್ನಲಾಗಿದೆ. ಹೀಗಾಗಿ, ತಮ್ಮ ಪ್ರಾಣ ಉಳಿಸಿಕೊಳ್ಳಲು ಅವರಿಬ್ಬರೂ ಕಟ್ಟಡದಿಂದ ಹೊರ ಬಂದಿದ್ದು, ಯಾರಾದರೂ ಬೆಂಕಿ ನಂದಿಸಲಿ ಎಂದು ಕಿರುಚಾಡಿದ್ದಾರೆ.

ಈ ಘಟನೆಯ ನಂತರ, ದುರಂತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಇಕೋ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಅಪಘಾತವೋ, ಕೊಲೆಯೋ, ಆತ್ಮಹತ್ಯೆ ಯತ್ನವೋ ಎಂಬುದನ್ನು ಪರಿಶೀಲಿಸಲು ಇಕೋಪಾರ್ಕ್ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಅಯೋಧ್ಯೆಯಲ್ಲಿ ಯಾಕೆ ಸ್ಪರ್ಧಿಸುತ್ತಿಲ್ಲ!?