Publish Date: Thu, 04 Jul 2019 (15:57 IST)
Updated Date: Thu, 04 Jul 2019 (15:59 IST)
ಮೈತ್ರಿ ಸರಕಾರದ ಅತೃಪ್ತ ಶಾಸಕರೊಂದಿಗೆ ಸಿಎಂ ಸಮಯ ನಿಗದಿಗೊಳಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಬೇಡಿಕೆಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ ಬಂಡಾಯ ಶಾಸಕರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜತೆಗೆ ನಾನು ಮಾತುಕತೆಗೆ ಸಿದ್ಧನಿದ್ದೇನೆ.
ಆದರೆ ಅವರು ನನ್ನ ಬೇಡಿಕೆಗೆ ಸ್ಪಂದನೆ ನೀಡಿದರೆ ಮಾತ್ರ ಮಾತನಾಡುವೆ. ಹೀಗಂತ ಕೈ ಪಡೆಯ ಶಾಸಕ ಆನಂದ ಸಿಂಗ್ ಹೇಳಿದ್ದಾರೆ.
ಬೇಡಿಕೆಗಳು ಏನೇನೂ ಅನ್ನೋದನ್ನು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಅವರು ಸಿಎಂಗೆ ವಿಷಯ ತಿಳಿಸಲಿದ್ದಾರೆ ಎಂದರು.
ಬೇಡಿಕೆಗಳನ್ನು ಈಡೇರಿಸುವುದಾದರೆ ಮಾತ್ರ ಸಿಎಂ ಜೊತೆಗೆ ಚರ್ಚೆ ಮಾಡುವೆ. ಕೋರ್ಟ್ ನಲ್ಲಿ ಹಾಜರಾಗಬೇಕಾದ ಕಾರಣ ಬೆಂಗಳೂರಿಗೆ ಬಂದಿದ್ದೆ. ಈಗ ಹೊಸಪೇಟೆಗೆ ಹೊರಡುತ್ತಿರುವೆ ಎಂದು ಹೇಳಿದ್ರು.