Publish Date: Tue, 02 Jul 2019 (16:10 IST)
Updated Date: Tue, 02 Jul 2019 (16:12 IST)
ನಾಚಿಕೆ, ಬುದ್ಧಿ ಇಲ್ಲದೇ ಮುಖ್ಯಮಂತ್ರಿ ಸರಕಾರವನ್ನು ನಡೆಸಿದರೆ ನಾವೇನು ಮಾಡಬೇಕು? ಹೀಗಂತ ಕಮಲ ಪಾಳೆಯದ ಶಾಸಕ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕ ಉಮೇಶ ಕತ್ತಿ, ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ಸೇತುವೆ ಉದ್ಘಾಟಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು. ಹೀಗಾಗಿ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದ್ರು.
ಮೈತ್ರಿ ಸರಕಾರ ಬಿದ್ದು ಹೋದರೆ ರಾಜ್ಯದಲ್ಲಿ ಹೊಸ ಸರಕಾರ ನಾವು ಮಾಡೇ ಮಾಡುತ್ತೇವೆ. ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಹೋಗಬೇಕಿತ್ತು.
ನಾಚಿಕೆ, ಬುದ್ಧಿ ಇಲ್ಲದೇ ಸಿಎಂ ಸರಕಾರ ನಡೆಸಿದರೆ ನಾವೇನು ಮಾಡಬೇಕು? ಮುಂದೆ ಚುನಾವಣೆ ಬಂದರೆ ಬರತಕ್ಕಂಥ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವದು ನಿಶ್ಚಿತ ಎಂದ್ರು.