Publish Date: Sat, 29 Jun 2019 (19:21 IST)
Updated Date: Sat, 29 Jun 2019 (19:22 IST)
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದಿದೆ. ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಲಿದ್ದು, ಯಡಿಯೂರಪ್ಪ ಮುಂದಿನ ಸಿಎಂ ಆಗಲಿದ್ದಾರೆ. ಹೀಗಂತ ಸಂಸದರೊಬ್ಬರು ಹೇಳಿದ್ದಾರೆ.
ಈಗ ಬಿಜೆಪಿ ಕಾರ್ಯಕರ್ತರು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಎಸಿ ಸ್ಲೀಪರ್ ಕೋಚ್, ಬಸ್ ಗಳಿವೆ. ಆದರೆ ರೈಲ್ವೆ ಸ್ಟೇಷನ್ ನಲ್ಲಿ ಬೋಗಿಗಳನ್ಮು ಕ್ಲೀನ್ ಮಾಡಲು ಬಳಸುವ ನೀರಿನಲ್ಲಿ ಸ್ನಾನ ಮಾಡಿ ಪಕ್ಷ ಕಟ್ಟಿದವರು ಅನಂತಕುಮಾರ್ ಮತ್ತು ಯಡಿಯೂರಪ್ಪನವರು. ಹೀಗಂತ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ನಮ್ಮೆಲ್ಲರ ಆಶಯಗಳನ್ನು ಈಡೇರಿಸುವ ಹೊಸ ಸರ್ಕಾರ ಬರಬೇಕಿದೆ. ಆ ಹೊಸ ಸರ್ಕಾರದ ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗುತ್ತಾರೆ ಎಂದರು. ಲೋಕಸಭೆಯಲ್ಲೂ ಈ ಮಾತನ್ನು ಹೇಳಿದ್ದೇನೆ. ಈಗಲೂ ಅದನ್ನೆ ಪುನರುಚ್ಛರಿಸುತ್ತಿದ್ದೇನೆ ಎಂದರು.
ಇನ್ನು, ಸೋಮಣ್ಣನವರಿಗೆ ಏನು ಮಹಾ ವಯಸ್ಸಾಗಿದೆ? ಈಗಲೂ ಅವರಿಗೆ ಇನ್ನೊಂದು ಮದುವೆ ಮಾಡಬಹುದು ಎಂದು ಕಾಲೆಳೆದರು ಬಿ.ಎಸ್.ಯಡಿಯೂರಪ್ಪ. ಈ ವಯಸ್ಸಲ್ಲೂ ಪಾದರಸದಂತೆ ಚಟುವಟಿಕೆಯಿಂದ ಇರೋರು ಸೋಮಣ್ಣನವರು ಎಂದು ತೇಜಸ್ವಿ ಸೂರ್ಯ ಹೇಳಿದ ಮಾತಿಗೆ ಹಾಸ್ಯ ಚಟಾಕಿ ಹಾರಿಸಿದರು ಯಡಿಯೂರಪ್ಪ.