ಯಡಿಯೂರಪ್ಪ ಕ್ಷೇತ್ರದ ಜನರಿಗೆ ದೇವೇಗೌಡರು ನೀಡಿದ ಭರವಸೆ ಏನು?

ಬುಧವಾರ, 26 ಜೂನ್ 2019 (16:35 IST)
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೊಸ ಭರವಸೆ ನೀಡಿದ್ದಾರೆ.

ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಳಾಂತರಿಸುವಂತೆ ಶಿವಮೊಗ್ಗದ ಜನರು ಮಾಡಿದ ಮನವಿಗೆ ಮಾಜಿ ಪ್ರಧಾನಿ ದೇವೇಗೌಡರು ಸ್ಪಂದಿಸಿದ್ದಾರೆ.  ಶಿವಮೊಗ್ಗದ ನೂರಾರು ಜನರು ಮಾಜಿ ಪ್ರಧಾನಿಗೆ ಈ ಕುರಿತು ಮನವಿಮಾಡಿದ್ರು.
ಪದ್ಮನಾಭನಗರದ ನಿವಾಸದಲ್ಲಿ ಹೆಚ್ಡಿಡಿ ಭೇಟಿಯಾಗಿ ಮನವಿ ಮಾಡಿಕೊಂಡರು ಜನರು.

ನಾವು ಮನೆ ಕಟ್ಟಿಕೊಂಡ ಜಾಗದಲ್ಲಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗ್ತಿದೆ. ಇದನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯ ಶಾಸಕರು, ಸಚಿವರಿಗೆ ಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ. ಹೀಗಾಗಿ ನೀವು ಇದನ್ನು ಸ್ಥಳಾಂತರ ಮಾಡಿಸಬೇಕು ಎಂದು ಮನವಿಮಾಡಿದ್ರು.

ಜನರ ಈ ಮನವಿಗೆ ಸ್ಪಂದಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದಾರೆ. ಅವರು ಬೆಂಗಳೂರಿಗೆ ಬಂದ ಕೂಡಲೇ ಈ ಬಗ್ಗೆ ಅವರ ಜೊತೆ ಮಾತನಾಡುತ್ತೇನೆ. ಸದ್ಯಕ್ಕೆ ಈ ವಿಷಯದ ಬಗ್ಗೆ ಸರ್ಕಾರ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಜೊತೆ ಮಾತನಾಡಿದ್ದೇನೆ. ಅವರು ಸ್ಥಳ ಪರಿಶೀಲನೆ ‌ಮಾಡಿ ಬರುವಂತೆ ನಗರಾಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಸ್ಥಳ ಪರಿಶೀಲನೆ ‌ಬಳಿಕ ವರದಿ ತಂದ ಬಳಿಕ ಕ್ರಮ ಕೈಗೊಳ್ಳೋದಾಗಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೋಕಸಭೆ ಚುನಾವಣೆ ಸೋತ ಕೈ ಅಭ್ಯರ್ಥಿಗಳ ಸಭೆ