Publish Date: Sat, 22 Jun 2019 (16:02 IST)
Updated Date: Sat, 22 Jun 2019 (16:04 IST)
ಮೈತ್ರಿ ಸರಕಾರದ ಬಗ್ಗೆ ಏನನ್ನೂ ಮಾತನಾಡಬಾರದೆಂದು ಹೇಳಿದ್ದರಿಂದ ಬಾಯಿಗೆ ಸೆಲ್ಲೋ ಟೇಪ್ ಹಾಕಿಕೊಂಡಿದ್ದೇನೆ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ನಡೆಯಲಿದೆ ಎನ್ನುವ ಹೇಳಿಕೆಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಂದಗೋಳದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಡಿ ಕೆ ಶಿವಕುಮಾರ್, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದೆ. ಸುಭದ್ರವಾಗಿರುತ್ತೆ ಅಂತ ನನಗೆ ನಂಬಿಕೆ ಇದೆ ಎಂದರು.
ನಾನು ಮಾತು ತಪ್ಪುವುದಿಲ್ಲ. ರಾಹುಲ್ ಗಾಂಧಿ ಅವರೂ ಮಾತು ತಪ್ಪುವುದಿಲ್ಲ ಎಂದರು.
ಮೈತ್ರಿ ಸರ್ಕಾರದ ಬಗ್ಗೆ ಏನನ್ನೂ ಮಾತಾಡಬಾರದೆಂದು ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ಮಾಡಿದ್ದಾರೆ.
ಅವರು ಹೇಳಿದ ಮೇಲೆ ಬಾಯಿಗೆ ಸೆಲ್ಲೋ ಟೇಪ್ ಹಾಕೊಂಡಿದ್ದೇವೆ ಅಂತ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.