Publish Date: Sat, 22 Jun 2019 (11:53 IST)
Updated Date: Sat, 22 Jun 2019 (11:55 IST)
ನವದೆಹಲಿ : ನಿನ್ನೆ ಅಂತರಾಷ್ಟ್ರೀಯ ಯೋಗಾದಿದ ಅಂಗವಾಗಿ ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗ ಯೋಗಾಸನ ಮಾಡಿದ ಫೋಟೋಕ್ಕೆ ವ್ಯಂಗ್ಯ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗ ಯೋಗಾಸನ ಮಾಡಿದ ಫೋಟೋಕ್ಕೆ 'ಇದು ನವ ಭಾರತ' ಎಂಬ ವ್ಯಂಗ್ಯದ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದರು. ಸೇನೆಯನ್ನು ಟೀಕೆ ಮಾಡಿದ್ದಕ್ಕೆ ರಾಹುಲ್ ಗಾಂಧಿಯ ವಿರುದ್ಧ ಹಲವರು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಕಿಡಿಕಾರಿದ ಬಿಜೆಪಿ, ನಿಜವಾಗಿಯೂ ಇದು ಹೊಸ ಭಾರತ. ವಿಶ್ವ ಯೋಗ ದಿನಾಚರಣೆಯಂದು ಶ್ವಾನಗಳು ಸಹ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿವೆ. ಆದರೆ ನೀವೂ ಮನುಷ್ಯರಾಗಲು ಇನ್ನೂ ಪ್ರಯತ್ನಿಸುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.