Select Your Language

Notifications

webdunia
webdunia
webdunia
webdunia

5ನೇ ಅಂತರಾಷ್ಟ್ರೀಯ ಯೋಗ ದಿನದ ಹಿನ್ನಲೆ; ಅಭಿಮಾನಿಗಳ ಜೊತೆ ಪ್ರಧಾನಿ ಮೋದಿ ಯೋಗಾಭ್ಯಾಸ

5ನೇ ಅಂತರಾಷ್ಟ್ರೀಯ ಯೋಗ ದಿನದ ಹಿನ್ನಲೆ; ಅಭಿಮಾನಿಗಳ ಜೊತೆ ಪ್ರಧಾನಿ ಮೋದಿ ಯೋಗಾಭ್ಯಾಸ
ನವದೆಹಲಿ , ಶುಕ್ರವಾರ, 21 ಜೂನ್ 2019 (11:37 IST)
ನವದೆಹಲಿ : 5ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ಪ್ರಧಾನಿ ಮೋದಿಯವರು ತಮ್ಮ ಅಭಿಮಾನಿಗಳ ಜೊತೆ ಯೋಗಾಭ್ಯಾಸ ಮಾಡುವುದರ ಮೂಲಕ ಆಚರಣೆ ಮಾಡಿದ್ದಾರೆ.



ಗುರುವಾರ ರಾಂಚಿಯನ್ನು ತಲುಪಿದ್ದ ಪ್ರಧಾನಿ ಮೋದಿಯವರು ಅಲ್ಲಿನ  ಮೈದಾನವೊಂದರಲ್ಲಿ ಯೋಗ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಜೊತೆ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಹೆಸರನ್ನು ನೊಂದಾಯಿಸಿದ್ದು, ಆದರೆ ಜನ ಹೆಚ್ಚಾದ ಕಾರಣ ಅವರಿಗೆ ಹತ್ತಿರದ ಬೇರೆ ಮೈದಾನದಲ್ಲಿ ಯೋಗದ ವ್ಯವಸ್ಥೆಯನ್ನು ಮಾಡಲಾಗಿದೆ.

 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗವು ಶಿಸ್ತು, ಸಮರ್ಪಣೆ ಹಾಗೂ ನಾವು ಅದನ್ನು ಜೀವನದುದ್ದಕ್ಕೂ ಪಾಲಿಸಬೇಕು. ಯೋಗವು ವಯಸ್ಸು, ಬಣ್ಣ, ಜಾತಿ, ಪಂಥ, ಸಿರಿತನ- ಬಡತನ, ಪ್ರಾಂತ್ಯ ಮತ್ತು ಗಡಿಯ ಭೇದವನ್ನು ಮೀರಿದೆ. ಯೋಗ ಎಲ್ಲರದ್ದು ಹಾಗೂ ಎಲ್ಲರೂ ಯೋಗಕ್ಕಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಮಧ್ಯಂತರ ಚುನಾವಣಾ ಹೇಳಿಕೆಗೆ ಕಾಂಗ್ರೆಸ್ ನಾಯಕರು ಹೇಳಿದ್ದೇನು?