Select Your Language

Notifications

webdunia
webdunia
webdunia
webdunia

ನಟಿ ಸಂಸದೆ ನುಸ್ರತ್ ಜಹಾನ್ ಅವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದೇಕೆ?

ನಟಿ ಸಂಸದೆ ನುಸ್ರತ್ ಜಹಾನ್ ಅವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದೇಕೆ?
ನವದೆಹಲಿ , ಗುರುವಾರ, 20 ಜೂನ್ 2019 (12:55 IST)
ನವದೆಹಲಿ : ತೃಣಮೂಲ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ಪಶ್ಚಿಮ ಬಂಗಾಳ ನಟಿ ನುಸ್ರತ್ ಜಹಾನ್ ಅವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.




ಹೌದು. ನಟಿ ನುಸ್ರತ್ ಜಹಾನ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಾಸಿರ್ ಹಾತ್ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಪ್ರಮಾಣವಚನ ಸ್ವೀಕಾರ ಮಾಡಬೇಕಾಗಿತ್ತು. ಆದರೆ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯಲ್ಲಿ ಮದುವೆಯಾದ ಕಾರಣ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.


ಈ ವಿಚಾರವನ್ನು ಇಂದು ಬೆಳಗ್ಗೆ ನುಸ್ರತ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಟ್ವೀಟರ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿರುವ ನುಸ್ರತ್, ನಿಖಿಲ್ ಜೈನ್ ಜೊತೆಗಿನ ವಿವಾಹ ತುಂಬಾ ಖುಷಿಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಹೆಚ್.ಡಿ.ಕೆ ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಲಿ- ಹೆಚ್.‌ ವಿಶ್ವನಾಥ್‌