Publish Date: Fri, 21 Jun 2019 (11:25 IST)
Updated Date: Fri, 21 Jun 2019 (11:27 IST)
ಬೆಂಗಳೂರು : ದೋಸ್ತಿ ಸರ್ಕಾರದಲ್ಲಿ ಏನೂ ಸರಿ ಇಲ್ಲ. ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯ ಇಲ್ಲ ಎಂಬ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಯಡಿಯೂರಪ್ಪನವರು, ನಾವು105 ಜನ ಶಾಸಕರಿದ್ದೇವೆ. ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ. ಯೋಗ್ಯತೆ ಇದ್ರೆ ಆಡಳಿತ ಮಾಡಲಿ ಇಲ್ಲದಿದ್ದರೆ ಬಿಟ್ಟು ಹೋಗಲಿ ಎಂದು ಸಮ್ಮಿಶ್ರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ನವರು ಮಧ್ಯಂತರ ಚುನಾವಣೆ ಬೇಡ ಅಂತಿದ್ದಾರೆ. ಜೆಡಿಎಸ್ ನವರು ಮಧ್ಯಂತರ ಚುನಾವಣೆ ಬೇಕು ಅಂತಿದ್ದಾರೆ. ಆದರೆ ನಾವು ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.