Select Your Language

Notifications

webdunia
webdunia
webdunia
webdunia

ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲಿನ ಈ ಸಮಸ್ಯೆ ದೂರವಾಗುತ್ತದೆ

ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ಕೂದಲಿನ ಈ ಸಮಸ್ಯೆ ದೂರವಾಗುತ್ತದೆ
ಬೆಂಗಳೂರು , ಶುಕ್ರವಾರ, 21 ಜೂನ್ 2019 (06:36 IST)
ಬೆಂಗಳೂರು : ಈ ಫ್ಯಾಶನ್ ಯುಗದಲ್ಲಿ ಮಕ್ಕಳಿಗೆ ತಲೆಗೆ ಎಣ್ಣೆ ಮಸಾಜ್ ಮಾಡುವುದೆಂದರೆ ಇಷ್ಟವಾಗುವುದಿಲ್ಲ. ವಿವಿಧ ಬಗೆಯ ಹೇರ್ ಸ್ಟೈಲ್ ಮಾಡಲು ಇದರಿಂದ ತೊಂದರೆಯಾಗುತ್ತದೆ ಎಂದು ಎಣ್ಣೆಯ ಬಳಿಯೂ ಸುಳಿಯುವುದಿಲ್ಲ. ಆದರೆ ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ತುಂಬಾ ಉಪಯೋಗಗಳಿವೆ.




*ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ಇದು ಚರ್ಮದ ಆಳಕ್ಕೆ ಹೋಗಿ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ಇದರಿಂದ ಉದುರಿಹೋದ ಕೂದಲು ಮತ್ತೆ ಬೆಳೇಯಲು ಸಹಕಾರಿಯಾಗುತ್ತದೆ.


* ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಕೂದಲ ಬೆಳೆವಣೆಗೆಗೆ ಬೇಕಾದ ಪೋಷಕಾಂಶಗಳು ಸಿಗುತ್ತದೆ.


* ಎಣ್ಣೆ ಮಸಾಜ್ ಮಾಡುವುದರಿಂದ ಆರೋಗ್ಯಯುತವಾದ ಕೂದಲುಗಳನ್ನು ಪಡೆಯಬಹುದು. ಇದರಿಂದ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.


* ಎಣ್ಣೆ ಮಸಾಜ್ ಮಾಡುವುದರಿಂದ ಕೂದಲು ತೇವಾಂಶದಿಂದ ಕೂಡಿರುತ್ತದೆ. ಇದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಕೈ ನೋವು ನಿವಾರಣೆಗೆ ಮಾತ್ರೆ ಬದಲು ಇದನ್ನು ಬಳಸಿ